ಆತ್ಮೀಯ ಸಚಿನ್,
ನನಗೆ ನಿಜಕ್ಕೂ ಬೇಸರವಾಗುತ್ತಿದೆ. ಇಪ್ಪತ್ತೆರಡು ವರ್ಷಗಳ ಕಾಲ ದೇಶಕ್ಕೋಸ್ಕರ ಆಡಿದರೂ ಏಕಾಂಗಿಯಾಗಿ ನೀನು ಪಂದ್ಯ ಗೆಲ್ಲಿಸಬೇಕು ಎಂದು ಜನ ಇಂದಿಗೂ ನಿರೀಕ್ಷಿಸುತ್ತಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ನೀನಲ್ಲದೆ ಇನ್ನೂ 10 ಆಟಗಾರರಿದ್ದಾರೆ ಎಂಬುದನ್ನೇ ನಾವು ಮರೆಯುತ್ತೇವೆ. ಕಳೆದ 5 ವಿಶ್ವಕಪ್ ಗಳಿಂದಲೂ ನೀನು ರನ್ ಮಷೀನ್ ನಂತೆ 60ರ ಸರಾಸರಿಯಲ್ಲಿ ಸ್ಕೋರ್ ಮಾಡಿದ್ದೀಯ. ಮೊನ್ನೆ ಕೂಡ ಉಳಿದವರೆಲ್ಲ ಪಂದ್ಯವನ್ನು ಲಘುವಾಗಿ ತೆಗೆದುಕೊಂಡರೆ, ಬೇಜವಾಬ್ದಾರಿತನ ತೋರಿದರೆ ನೀನು ಮಾತ್ರ 111 ರನ್ ಹೊಡೆಯುವ ಮೂಲಕ ನಿನ್ನ ಶ್ರೇಷ್ಠತೆಯನ್ನು ಸಾಬೀತು ಮಾಡಿದ್ದೀಯ. ಕೆಲವರು ಕ್ಯಾಚ್ ಗಳನ್ನು ಕೈಚೆಲ್ಲುತ್ತಿದ್ದರೆ, ಸಬ್ ಸ್ಟಿಟ್ಯೂಟ್ ಫೀಲ್ಡರ್ ಗಳನ್ನು ಕಳುಹಿಸಿ ಪಂದ್ಯದ ಮಧ್ಯೆಯೇ ವಿಶ್ರಾಂತಿಯ ಮೊರೆ ಹೋಗುತ್ತಿದ್ದರೆ, ನೀನು ಮಾತ್ರ ಔಟ್ ಫೀಲ್ಡ್ ನಲ್ಲಿ ನಿಂತು ಬಾಲನ್ನು ಬೆನ್ನಟ್ಟುತ್ತಿದ್ದೆ, ವಿಕೆಟ್ ಬಳಿ ಬೀಳುವಂತೆ ಎಸೆಯುತ್ತಿದ್ದೆ.
ಡಿಯರ್ ಸಚಿನ್, ನಿನ್ನಂಥವನನ್ನು ಪಡೆಯುವ ಯೋಗ್ಯತೆ ಖಂಡಿತ ಹಾಲಿ ಭಾರತೀಯ ಕ್ರಿಕೆಟ್ ತಂಡಕ್ಕಿಲ್ಲ!
ನೂರು ಕೋಟಿ ಭಾರತೀಯರ ಸಲುವಾಗಿ ದೇಶಕ್ಕಾಗಿ ಬೆವರು, ರಕ್ತ ಬಸಿಯುವುದರ ಮಹತ್ವ ಏನು ಎಂಬುದು ಅವರಿಗೆ ಗೊತ್ತಿಲ್ಲ. ಅವರಿಗೆ ಅವರ ಅರ್ಹತೆ, ಯೋಗ್ಯತೆ ಮೀರಿ ಹಣ, ಹೆಸರು ಬಂದುಬಿಟ್ಟಿದೆ. ಅವರಲ್ಲಿರುವ ಪ್ರತಿಭೆಗೂ ಅವರಿಗೆ ಬಂದಿರುವ ಖ್ಯಾತಿ, ಕಾಸಿಗೂ ಹೊಂದಾಣಿಕೆಯೇ ಆಗುವುದಿಲ್ಲ. ಸಚಿನ್, 1989, ಅಂದರೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ತರುವಾಯ ಟಾಮ್ ಆಲ್ಟರ್ ಗೆ ನೀಡಿದ ಸಂದರ್ಶನದ ವೇಳೆ ನೀನು ಹೇಳಿದ್ದು ನಿನಗೇ ನೆನಪಿದೆಯಾ?
I just want to play cricket!
ಸಚಿನ್, ನಿನ್ನಿಂದ ಸತ್ಯವನ್ನು ಮಚ್ಚಿಡಲು ನನಗಿಷ್ಟವಿಲ್ಲ. ಖಂಡಿತ ನೀನು ನನ್ನ ನೆಚ್ಚಿನ ಕ್ರಿಕೆಟ್ ಆಟಗಾರನಲ್ಲ! ಇಷ್ಟಕ್ಕೂ ನೆಚ್ಚಿನ, ಅಚ್ಚುಮೆಚ್ಚಿನ ವಿಷಯ ಎದುರಾಗುವುದು ಮನುಷ್ಯ, ಮನುಷ್ಯರ ನಡುವೆಯಷ್ಟೇ!! ಆ ದೇವರನ್ನು ನಾವು ಆರಾಧಿಸುತ್ತೇವೆ, ಮೇಲ್ಪಂಕ್ತಿಯಾಗಿಟ್ಟುಕೊಳ್ಳುತ್ತೇವೆ ಹಾಗೂ ಅತ್ಯಾಶ್ಚರ್ಯದಿಂದ ಅವನನ್ನು ದಿಟ್ಟಿಸುತ್ತೇವೆ!!! ಈ ಭಾರಿಯ ವಿಶ್ವಕಪ್ ಅನ್ನು ಗೆದ್ದುಕೊಡುವಂತೆ ನಾವು ಸಚಿನ್ ನಿಂದ ನಿರೀಕ್ಷಿಸುತ್ತಿದ್ದೇವೆ. ಹಾಗಾದರೆ ಉಳಿದ ಆಟಗಾರರ ಕೆಲಸವೇನು? ಅವರ ಕೆಲಸ ಡ್ರೆಸ್ಸಿಂಗ್ ರೂಮಿನಲ್ಲಿ “ಲುಡೋ” ಆಟವಾಡುವುದಾ? ವಿಶ್ವಕಪ್ ಟೂರ್ನಿಯಲ್ಲಿ ಅಡುವುದಷ್ಟೇ ತಮ್ಮ ಕೆಲಸವಲ್ಲ, ಗೆಲ್ಲಬೇಕು ಎಂಬುದನ್ನು ಭಾರತೀಯ ಕ್ರಿಕೆಟ್ ತಂಡದ ಉಳಿದವರು ಅದಷ್ಟು ಬೇಗ ಅರಿತುಕೊಳ್ಳುತ್ತಾರೆಂದು ಅಶಿಸುತ್ತೇನೆ.
ದಯವಿಟ್ಟು ಗಮನಿಸಿ: ಇದೇ ದಕ್ಷಿಣ ಅಫ್ರಿಕಾದ ವಿರುದ್ಧ 1992ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿದ್ದ ‘ಹೀರೋ ಕಪ್ ‘ ಸೆಮಿಫೈನಲ್ ನಲ್ಲಿ ಮೊನ್ನೆಯಂಥದ್ದೇ ಸನ್ನಿವೇಶ ಸೃಷ್ಟಿಯಾಗಿತ್ತು. ಕಡೆಯ ಓವರ್ ನ 6 ಬಾಲುಗಳಲ್ಲಿ ಗೆಲ್ಲಲು ದಕ್ಷಿಣ ಆಫ್ರಿಕಾಕ್ಕೆ ಬೇಕಿದ್ದಿದು ಕೇವಲ 6 ರನ್. ದೈತ್ಯ ದಾಂಡಿಗ ಬ್ರಿಯಾನ್ ಮ್ಯಾಕ್ ಮಿಲನ್ ಬ್ಯಾಟ್ ಹಿಡಿದು ನಿಂತಿದ್ದ. ಯಾರಿಗೆ ಓವರ್ ಕೊಡುವುದು ಎಂದು ಚಿಂತಿತರಾಗಿದ್ದ ನಾಯಕ ಅಜರುದ್ದೀನ್ ಅವರ ಕೈಯಿಂದ ಬಾಲು ಕಸಿದುಕೊಂಡ ಸಚಿನ್, ಇಡೀ ದೇಶವೇ ಹೆಮ್ಮೆಯಿಂದ ಬೀಗುವಂಥ ಬೌಲಿಂಗ್ ಮಾಡಿ ಭಾರತಕ್ಕೆ ಗೆಲುವು ತಂದುಕೊಟ್ಟ. ಆ ಓವರ್ ನಲ್ಲಿ ಆತ ಕೊಟ್ಟಿದ್ದು ಕೇವಲ 3 ರನ್. ಎದೆಗಾರಿಕೆ, ಶೌರ್ಯ ಏನೆಂಬುದನ್ನು ಅರಿಯುವುದಕ್ಕಾದರೂ ನಮ್ಮ ಟೀಮ್ ಇಂಡಿಯಾ ಆಟಗಾರರು ಆ ಓವರನ್ನು ಮತ್ತೊಮ್ಮೆ ನೋಡಬೇಕು.
ಸಚಿನ್, ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುವ ಫೈನಲ್ ನಲ್ಲಿ ಭಾರತ ಗೆಲ್ಲುತ್ತದೆಂದು ಆಶಿಸುತ್ತೇನೆ. ಇಲ್ಲವಾದರೆ ಶತಕೋಟಿ ಭಾರತೀಯರು ಅವಮಾನದಿಂದ ತಲೆತಗ್ಗಿಸಿ ನಿನ್ನ ಕ್ಷಮೆ ಕೇಳಬೇಕಾಗುತ್ತದೆ.
ಗೌರವಗಳೊಂದಿಗೆ,
ಸ್ಟ್ರೈಟ್ ಡ್ರೈವ್ ಮಾಡಿ, ಬ್ಯಾಟಿನ ಮೇಲಿನ ಜಾಹೀರಾತನ್ನು ತೋರಿದಾಗಲೆಲ್ಲ ಹುಚ್ಚೆದ್ದು ಕುಣಿಯುವ, ಮರಳಿನ ಬಿರುಗಾಳಿಗೆ ಎದೆಯೊಡ್ಡಿ ನೀನು ಸೆಂಚುರಿ ಹೊಡೆದಾಗ ನಿದ್ರೆಬಿಟ್ಟು ನೋಡಿದ, 1998ರಲ್ಲಿ ವಿಶ್ವವಿಖ್ಯಾತ ಸ್ಪಿನ್ನರ್ ಶೇನ್ ವಾರ್ನ್ ಎಸೆಯುತ್ತಿದ್ದ ಪ್ರತಿಬಾಲಿಗೂ ನೀನು ಹೊಡೆಯುತ್ತಿದ್ದ ಹೊಡೆತ ನೋಡಿ ಖುಷಿಪಟ್ಟ, 2003ರ ವಿಶ್ವಕಪ್್ನಲ್ಲಿ ಶೋಯೆಬ್ ಅಖ್ತರ್ ನನ್ನು ಅಟ್ಟಾಡಿಸಿ ಹೊಡೆದಾಗ ಹಿರಿ ಹಿರಿ ಹಿಗ್ಗಿದ ಹಾಗೂ ನಿನ್ನ ನಿವೃತ್ತಿಯ ನಂತರ ಕ್ರಿಕೆಟ್ ನೋಡುವುದನ್ನೇ ನಿಲ್ಲಿಸಲಿರುವ ಹುಚ್ಚು ಅಭಿಮಾನಿ…
ಒಂದೆಡೆ, ಮಾರ್ಚ್ 12ರಂದು ದಕ್ಷಿಣ ಅಫ್ರಿಕಾ ವಿರುದ್ಧ ಭಾರತದ ಬ್ಯಾಟ್ಸ್ ಮನ್ ಗಳು ತರಗೆಲೆಗಳಂತೆ ಉದುರಿ ಸೋತಾಗ ಖ್ಯಾತ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿಯೊಬ್ಬ ಬರೆದ ಇಂಥದ್ದೊಂದು ಫೇಸ್ಬುಕ್, ಆರ್ಕುಟ್ ಮುಂತಾದ ಸೋಷಿಯಲ್ ವೆಬ್ ಸೈಟ್ ಗಳು, ಬ್ಲಾಗ್, ಇಂಟರ್ ನೆಟ್ ನ ತುಂಬೆಲ್ಲ ಹರಿದಾಡುತ್ತಿದೆ. ಇನ್ನೊಂದೆಡೆ ಸಚಿನ್ ಸೆಂಚುರಿ ಹೊಡೆದಾಗಲೆಲ್ಲ ಭಾರತ ಸೋಲುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕಿಂತ ಕೃತಘ್ನತೆ, ಸಿನಿಕತೆ, ತಿಳಿಗೇಡಿತನ ಇನ್ನೇನಾದರೂ ಇರಲು ಸಾಧ್ಯವೆ? ಇಂತಹ ಮಾತು, ಅರೋಪಗಳಲ್ಲಿ ನಿಜಾಂಶವೇನಾದರೂ ಇದೆಯೇ?
ಸಚಿನ್ ಇದುವರೆಗೂ 48 ಏಕದಿನ ಶತಕಗಳನ್ನು ಬಾರಿಸಿದ್ದಾನೆ. ಅದರಲ್ಲಿ 33 ಶತಕಗಳು ಭಾರತಕ್ಕೆ ಗೆಲುವು ತಂದುಕೊಟ್ಟಿವೆ. ಹದಿಮೂರು ಬಾರಿ ಭಾರತ ಸೋತಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕೊಟ್ಟಿಲ್ಲವಾದರೆ ಮತ್ತೊಂದು ಟೈ ಅಗಿದೆ. ಐವತ್ತೊಂದು ಟೆಸ್ಟ್ ಶತಕಗಳಲ್ಲಿ 20 ಬಾರಿ ಭಾರತ ಗೆದ್ದಿದೆ. 12 ಪಂದ್ಯಗಳಲ್ಲಿ ಸೋಲುಂಟಾಗಿದ್ದರೆ 19 ಶತಕಗಳು ಪಂದ್ಯವನ್ನು ಡ್ರಾ ಮಾಡಿಸಿವೆ. ಎಲ್ಲಕ್ಕೂ ಮಿಗಿಲಾಗಿ, ಕ್ರಿಕೆಟ್ ಎಂಬುದು ಸಾಂಘಿಕ ಆಟವಾಗಿರುವಾಗ ಇದಕ್ಕಿಂತ ಒಳ್ಳೆಯ ದಾಖಲೆ ಇನ್ನೇನಿರಲು ಸಾಧ್ಯ? ಇಂದಿನ ತಲೆಮಾರಿಗೆ ಸಚಿನ್ ಆಟ ಸ್ಫೋಟಕವಾಗಿ, ಗ್ಲಾಮರಸ್ ಆಗಿ ಕಾಣಿಸದೇ ಇರಬಹುದು. ಆದರೆ 20ನೇ ಶತಮಾನದ ಕಡೆಯ ದಶಕವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ಸಚಿನ್ ಅಟದ ಸವಿ. ಇಂಚುಪಟ್ಟಿ ಹಿಡಿದು ಗೆರೆ ಎಳೆದಂತೆ ಹೊಡೆಯುತ್ತಿದ್ದ ಸ್ಟ್ರೈಟ್ ಡ್ರೈವ್ ಗಳು, ಆ ಬ್ಯಾಕ್ ಫುಟ್ ಪಂಚ್, ಬ್ಯಾಕ್ ಫುಟ್ ಹುಕ್… ಅಹಾ! ತನ್ನ ಬಗ್ಗೆ ಲಘುವಾಗಿ ಮಾತನಾಡಿದ ಇಂಗ್ಲೆಂಡ್ ಬೌಲರ್ ಕ್ಯಾಡಿಕ್್ಗೆ ಮಾರ್ಕ್ ಮಾಡಿ ಹೊಡೆದಿದ್ದನ್ನು, ಜಿಂಬಾಬ್ವೆಯ ಹೆನ್ರಿ ಓಲಾಂಗೋ, ಆಸ್ಟ್ರೇಲಿಯಾದ ಕ್ಯಾಸ್ಪರೋವಿಚ್ ಗೆ ಬಾರಿಸಿದ್ದನ್ನು ಮರೆಯಲು ಸಾಧ್ಯವೆ? ಒಂದಿಡೀ ತಲೆಮಾರನ್ನೇ ಪ್ರೇರೇಪಿಸಿದ, ಇಡೀ ದೇಶವಾಸಿಗಳನ್ನೇ ಮಂತ್ರಮುಗ್ಧವಾಗಿಸಿದ ವ್ಯಕ್ತಿ ಸಚಿನ್. ಇವತ್ತು ಸಚಿನ್ ಆಟ ಅಬ್ಬರದಿಂದ ಕೂಡಿಲ್ಲದೇ ಇರಬಹುದು. ಎಲ್ಲರೂ ಅಬ್ಬರದ ಹಿಂದೆ ಬಿದ್ದರೆ ದಕ್ಷಿಣ ಅಫ್ರಿಕಾದ ವಿರುದ್ಧ ಆದಂತೆ 29 ರನ್ ಗೆ 9 ವಿಕಟ್ ಕಳೆದುಕೊಳ್ಳಬೇಕಾಗಿಬರಬಹುದು! ಇರಲಿ, ಇವತ್ತು ಸಚಿನ್ ಆಟ ಹಿಂದಿನ ಅಕರ್ಷಣೆ ಕಳೆದುಕೊಂಡಿರುವುದಕ್ಕೂ ಕಾರಣವಿದೆ. ಆ ಮನಮೋಹಕ ಬ್ಯಾಕ್ ಫುಟ್ ಪಂಚ್, ಬ್ಯಾಕ್ ಫುಟ್ ಹುಕ್ ಗಳೇ ತನ್ನ ಬೆನ್ನುನೋವಿಗೆ ಕಾರಣ ಎಂದು ಗೊತ್ತಾದ ಕೂಡಲೇ ಅಡುವ ಪರಿಯನ್ನೇ ಬದಲಾಯಿಸಿಕೊಂಡಿದ್ದಾನೆ. ಇಷ್ಟಾಗಿಯೂ ಆತನ ಒಟ್ಟಾರೆ ರನ್ ಗಳಿಕೆಗೆ ಯಾವತ್ತೂ ಕೊರತೆ ಬೀಳಲಿಲ್ಲ. ಅಬ್ಬರದ ಬ್ಯಾಟಿಂಗ್ ನಮಗೆ ಇಷ್ಟವಾಗಬಹುದು. ಅದರೆ ಅಂತಿಮವಾಗಿ ಲೆಕ್ಕಕ್ಕೆ ಬರುವುದು ಗೆಲುವು ಮಾತ್ರ. ಅಂತಹ ಗೆಲುವಿಗೆ ಹಿಂದೆ ರಾಹುಲ್ ದ್ರಾವಿಡ್ ಆಡುತಿದ್ದ, ಈಗ ಸಚಿನ್ ತೋರುತ್ತಿರುವ ಪ್ರಬುದ್ಧ ಆಟ ಬಹುಮುಖ್ಯ. ಏಕದಿನ ಪಂದ್ಯದಲ್ಲಿ ಯಾರಾದರೂ 200 ರನ್ ಬಾರಿಸುವುದಾದರೆ ಅದು ಸೆಹವಾಗ್ ನಿಂದ ಮಾತ್ರ ಸಾಧ್ಯ ಎಂಬ ಮಾತು ಕೇಳುತ್ತಿರುವ ಸಂದರ್ಭದಲ್ಲಿ ಆ ಸಾಧನೆ ಮಾಡಿದವನು ಮಾತ್ರ ಸಚಿನ್. ಮೂವತ್ತೇಳರ ಪ್ರಾಯದಲ್ಲೂ ಏಕದಿನ ಪಂದ್ಯದಲ್ಲಿ 200 ರನ್ ಗಳಿಸುತ್ತಾನೆಂದರೆ ಸಚಿನ್ ಇಂದಿಗೂ ಕ್ರಿಕೆಟ್ಟನ್ನು ಎಷ್ಟು ಶ್ರದ್ಧೆಯಿಂದ ಆಡುತ್ತಾನೆ, ಇಂದಿಗೂ ಕ್ರಿಕೆಟ್ ಬಗ್ಗೆ ಅತನಲ್ಲಿ ಎಂತಹ ಅತೀವ ಪ್ರೀತಿಯಿದೆ, ದೇಶಕ್ಕಾಗಿ ಆಡುವಾಗ ವೈಯಕ್ತಿಕ ಬಹಾದ್ದೂರಿಕೆ ಪ್ರದರ್ಶನಕ್ಕಿಂತ ತಾಳ್ಮೆ ಮುಖ್ಯ ಎಂಬುದನ್ನು ಹೇಗೆ ಆತ ತೋರ್ಪಡಿಸುತ್ತಾನೆ ಎಂಬುದ ಗಮನಿಸಿ. ಸಚಿನ್ ಗೂ ಇತರ ಆಟಗಾರರಿಗೂ ಇರುವ ವ್ಯತ್ಯಾಸವೇ ಇದು. ದಕ್ಷಿಣ ಆಫ್ರಿಕಾ ವಿರುದ್ಧ 267 ರನ್ ಗೆ 1 ವಿಕೆಟ್, 295ಕ್ಕೆ ಆಲೌಟ್. 29 ರನ್್ಗಳಿಗೆ 9 ವಿಕೆಟ್ ಪತನ. ಅಂತಿಮವಾಗಿ ಪಂದ್ಯದಲ್ಲಿ ಸೋಲು. ಇದಕ್ಕೆಲ್ಲ ಸಚಿನ್ ನನ್ನು ದೂರುವುದು ಎಷ್ಟು ಸರಿ?
ಹಾಗಾದರೆ ಭಾರತ ಎಡವಿದ್ದೆಲ್ಲಿ?
ಅದು ಕೆಟ್ಟದ್ದಕ್ಕೋ, ಒಳ್ಳೆಯಯದಕ್ಕೋ, ಒಟ್ಟಾರೆ ಐಪಿಎಲ್ ಉಚ್ಛ್ರಾಯ ಸ್ಥಿತಿಗೆ ಬಂದ ಕ್ರಿಕೆಟ್ ಕೂಡ ಮನರಂಜನೆಯಾಗಿದ್ದು ನೋಡುವವರು, ಅಡುವವರು ಇಬ್ಬರಿಗೂ ತಾಳ್ಮೆ ಇಲ್ಲದಾಗಿದೆ. ಅತ್ಯಂತ ವೇಗವಾಗಿ ರನ್ ಮಾಡಬೇಕು, ಬರೀ ಫೋರ್, ಸಿಕ್ಸರ್ ಗಳೇ ಇರಬೇಕು. ಜನರ ನಿರೀಕ್ಷೆ ಹಾಗೂ ಒಂದೇ ಪಂದ್ಯದಲ್ಲಿ ಹೀರೋ ಅಗಿಬಿಡಬೇಕೆಂಬ ಆಟಗಾರರ ಮಹತ್ವಾಕಾಂಕ್ಷೆಗಳು ತಾಳ್ಮೆಗೆಡಿಸಿ ಆತುರತೆ ಮೈಗೂಡುವಂತೆ ಮಾಡಿವೆ. ಹಾಲಿ ಭಾರತೀಯ ತಂಡದಲ್ಲಿರುವ ಬಹುತೇಕರ ಕಥೆ ಇದೇ ಆಗಿದೆ. ಬರೀ ಸ್ಪಿನ್ನರ್ ಗಳಿಗಷ್ಟೇ ಬಾರಿಸುವ ಯೂಸುಫ್ ಪಠಾಣ್ ಕೂಡ ದೊಡ್ಡ ದಾಂಡಿಗ. ಹರಭಜನ್ ಗೆ ಏಜ್ ಆದರೂ ಜವಾಬ್ದಾರಿಯುತ ಆಟ ಮೈಗೂಡಲಿಲ್ಲ. ಕಳೆದ 10 ವರ್ಷದಿಂದ ಕ್ರಿಕೆಟ್ ಆಡುತ್ತಿದ್ದರೂ ಯುವರಾಜ್ ಸಿಂಗ್ ಗೆ ಜವಾಬ್ದಾರಿ, ಪ್ರಬುದ್ಧತೆ ಬರಲಿಲ್ಲ. ಪ್ರತಿಭೆ ಇದ್ದರೂ ವಿಶ್ವಾಸಾರ್ಹ ಬ್ಯಾಟ್ಸ್ ಮನ್ ಎನಿಸಿಕೊಳ್ಳಲಿಲ್ಲ. ಜಹೀರ್ ಖಾನ್ ಹೊರತುಪಡಿಸಿ ಭಾರತ ತಂಡದಲ್ಲಿ ಯೋಗ್ಯ ಬೌಲರ್ ಗಳೇ ಇಲ್ಲದಾಗಿದೆ. ಇಂತಹ ಒಂದೊಂದು ದೌರ್ಬಲ್ಯಗಳು ಒಂದೊಂದು ಪಂದ್ಯಗಳಲ್ಲಿ ಕಾಣಿಸಿಕೊಂಡು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿವೆ. ಹಾಗಿರುವಾಗ ಸಚಿನ್ ಒಬ್ಬನನ್ನೇ ಪೂರ್ವಗ್ರಹದಿಂದ ದೂರುವುದು ಎಷ್ಟು ಸರಿ?
‘’ಸಚಿನ್ ಹಾಗೂ ಸೆಹವಾಗ್ ದಕ್ಷಿಣ ಅಫ್ರಿಕಾದ ಬೌಲರ್ ಗಳನ್ನು ಹಿಗ್ಗಾಮುಗ್ಗ ಚಚ್ಚುತ್ತಿದ್ದಾರೆ ಎಂಬ ಸುದ್ದಿ ಗೊತ್ತಾಯಿತು. ಸ್ವಲ್ಪ ಸಮಯದಲ್ಲೇ ಮನೆಗೆ ಧಾವಿಸಿ ಟೀವಿ ಆನ್ ಮಾಡಿದರೆ ಕಂಡಿದ್ದೇ ಬೇರೆ. ಒಂದು ಕ್ಷಣಕ್ಕೆ ದಿಗ್ಭ್ರಮೆಯಾಯಿತು. ಇದೇನು ಬ್ಯಾಟ್ಸ್ ಮನ್ ಗಳ Ramp ಶೋ ನಡೆಯುತ್ತಿದೆಯಾ ಎಂದನಿಸಿತು. ಪ್ರೇಕ್ಷಕರ ಕರತಾಡನ ನಡುವೆ ಬ್ಯಾಟ್ ಝಳಪಿಸುತ್ತಾ ಪಿಚ್ ನತ್ತ ಆಗಮಿಸುತ್ತಿದ್ದ ಬ್ಯಾಟ್ಸ್ ಮನ್ ಗಳು ಫ್ಯಾಶನ್ ಶೋನಂತೆ ಒಂದು ಕ್ಷಣ ನಿಂತು ಬ್ಯಾಟು ತೋರಿ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ನತ್ತ ಸಾಗುತ್ತಿದ್ದರು. ಯಾರ್ಕರ್ ಗೆ ಅಡ್ಡಾದಿಡ್ಡಿ ಬ್ಯಾಟು ಬೀಸಿದ ಹರಭಜನ್ ಸಿಂಗ್, ಹಾರಿ ಹೋದ ವಿಕೆಟ್ಟನ್ನು ಹಿಂತಿರುಗಿ ನೋಡದೆಯೇ, ಯಾವ ಹಾವಭಾವ ತೋರದೆಯೇ ಪೆವಿಲಿಯನ್ ನತ್ತ ದಾಪುಗಾಲಿಟ್ಟರು. ಈ ನಾಚಿಕೆಗೇಡಿಗಳಿಗೆ ಜಾಹೀರಾತಿನಿಂದ ಹಣ ಹರಿದು ಬರುತ್ತಿರುವಾಗ ದೇಶ ಮುಖ್ಯವಾಗುವುದಿಲ್ಲ. ಐಪಿಎಲ್ ನಲ್ಲಿ ಭಾರೀ ದುಡ್ಡು ಕಾಯುತ್ತಿರುವಾಗ ವರ್ಲ್ಡ್ ಕಪ್ ನಲ್ಲಿ ಯಾಕೆ ಮೈ ಕೈ ನೋಯಿಸಿಕೊಂಡು ಗಾಯ ಮಾಡಿಕೊಳ್ಳಬೇಕು?’’ ಹಾಗೆಂದು ಅಭಿಮಾನಿಯೊಬ್ಬರು ಅಲವತ್ತುಕೊಂಡಿದ್ದಾರೆ. ಸಾಮಾನ್ಯವಾಗಿ ಎಂದೂ ಯಾರನ್ನೂ ದೂರದ, ಒಬ್ಬ ಬೌಲರ್ ಅಥವಾ ಬ್ಯಾಟ್ಸ್ ಮನ್ ಕಳಪೆಯಾಗಿ, ಬೇಜವಾಬ್ದಾರಿತನದಿಂದ ಆಡಿ ತಂಡ ಸೋತಾಗಲೂ ಆ ಆಟಗಾರನನ್ನು ಸಮರ್ಥಿಸಿಕೊಳ್ಳುವ ನಾಯಕ ಮಹೇಂದ್ರ ಸಿಂಗ್ ಧೋನಿಯೇ ಕುಪಿತಗೊಂಡಿದ್ದಾರೆ.
”ಕೆಲವರು ದೇಶಕ್ಕೆ ಬದಲು ಪ್ರೇಕ್ಷಕರಿಗಾಗಿ ಆಡುತ್ತಿದ್ದರು. ಅಂತಹ ಭಾರೀ ಹೊಡೆತಗಳನ್ನು ಬಾರಿಸುವಾಗ ತಾವು ದೇಶಕ್ಕಾಗಿ ಆಡುತ್ತಿದ್ದೇವೆ ಎಂಬುದನ್ನೇ ಮರೆತು ಬಿಡುತ್ತಾರೆ. 20 ರನ್ ಹೆಚ್ಚಿಗೆ ಹೊಡೆಯುವ ಭರದಲ್ಲಿ ಕೊನೆಗೆ 40 ರನ್ ಕೊರತೆ ಬಿದ್ದಿರುತ್ತದೆ” ಎಂದು ನೇರ ಹಾಗೂ ಕಟುವಾಗಿಯೇ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳನ್ನು ಟೀಕಿಸಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಬೌಲಿಂಗ್ ವಿಭಾಗದಲ್ಲಿನ ಕೊರತೆಯನ್ನು ಬ್ಯಾಟಿಂಗ್ ನಲ್ಲಿ ಸರಿದೂಗಿಸುವ ಸಾಮರ್ಥ್ಯ ಭಾರತೀಯ ತಂಡಕ್ಕಿದೆ. ಆದರೆ ಜವಾಬ್ದಾರಿಯನ್ನರಿತು ಆಡಬೇಕಷ್ಟೆ. ಇಲ್ಲವಾದರೆ ಮುಂದಿನ ವಿಶ್ವ ಕಪ್ ಬಂದಾಗಲೂ 1983ರ ಗೆಲುವನ್ನೇ ಚಪ್ಪರಿಸುತ್ತಿರಬೇಕಾಗುತ್ತದೆ. ನಾಳೆ ವೆಸ್ಟ್ ಇಂಡೀಸ್ ವಿರುದ್ಧ ಮೈದಾನಕ್ಕಿಳಿಯುವಾಗ ತಾವು ಶತಕೋಟಿ ಭಾರತೀಯರಿಗಾಗಿ ಆಡುತ್ತಿದ್ದೇವೆ ಎಂಬ ಅರಿವು ನಮ್ಮ ಆಟಗಾರರಲ್ಲಿ ಮೂಡಿದರೆ ಜಯ ಖಂಡಿತ.
ಆಲ್ ದಿ ಬೆಸ್ಟ್!

No comments:
Post a Comment